ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾದ ಕ್ರೀಡಾ ಪಟುಗಳ
ONLINE ನೋಂದಣಿ - 2026 (V.1)


ಕಬ್ಬನ್ ಉದ್ಯಾನವನ, ಬೆಂಗಳೂರು.
:: ಷರತ್ತು ಮತ್ತು ನಿಬಂಧನೆಗಳು ::
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳು ಮಾತ್ರ Online ನಲ್ಲಿ ಮಾತ್ರ ನೋಂದಣಿಯಾಗಬೇಕು.
Online ನಲ್ಲಿ ನೋಂದಣಿ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಸಂಘದ ವತಿಯಿಂದ ನೋಂದಣಿ ಕಾರ್ಡ್ಗಳನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ವಿತರಿಸಲಾಗುವುದು.
ನೋಂದಣಿ ಕಾರ್ಡ್ ಹಾಗೂ ಟ್ರ್ಯಾಕ್‌ಸೂಟ್–ಕ್ಯಾಪ್ ಪಡೆಯುವ ಸಂದರ್ಭದಲ್ಲಿ ಕ್ರೀಡಾಪಟುಗಳು ಕಡ್ಡಾಯವಾಗಿ ತಮ್ಮ ಕಚೇರಿಯ/ ಇಲಾಖೆಯ ಗುರುತಿನ ಚೀಟಿಯನ್ನು ಪರಿಶೀಲನೆಗಾಗಿ ತೋರಿಸತಕ್ಕದ್ದು.
ನೋಂದಣಿ ಕಾರ್ಡ್ಗಳನ್ನು ಸ್ಫರ್ಧೆಗಳಲ್ಲಿ ಭಾಗವಹಿಸಲು ಹಾಗೂ ಊಟ/ ವಸತಿ/ ಟ್ರ್ಯಾಕ್ ಸೂಟ್/ ಕ್ಯಾಪ್ ಪಡೆಯುವ ಸಂದರ್ಭದಲ್ಲಿ ತೋರಿಸತಕ್ಕದ್ದು, ಬೇರೊಬ್ಬರಿಗೆ ಸೌಲಭ್ಯಗಳನ್ನು ವರ್ಗಾಯಿಸುವಂತಿಲ್ಲ. ಸರ್ಕಾರಿ ನೌಕರರು ಈ ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಸಂಯಮದಿAದ ವರ್ತಿಸಿ ಕ್ರೀಡಾಕೂಟಗಳ ಯಶಸ್ವಿಗೆ ಸಹಕರಿಸಲು ಕೋರಿದೆ.
ಸುಳ್ಳು ಮಾಹಿತಿ ನೀಡಿ ಕ್ರೀಡಾಕೂಟದಲ್ಲಿ ನೋಂದಣಿ ಮಾಡಿಕೊಂಡಲ್ಲಿ, ಅಂತಹ ನೌಕರರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ.
ಒಬ್ಬ ಕ್ರೀಡಾಪಟು(ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ವಿಜೇತರಾಗಿದ್ದರು ಸಹ) ಒಂದು ಬಾರಿ ಮಾತ್ರ ನೋಂದಣಿ ಮಾಡಬೇಕು.
-ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು